ಬಂಟ್ವಾಳ: ವಿಶ್ವ ಹಿಂದೂ ಪರಿಷತ್ , ಬಜರಂಗದಳ ಬಂಟ್ವಾಳ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಆದಿತ್ಯವಾರ ದಿನಾಂಕ 13-08-2017ರಂದು ಸಂಜೆ 4.30ಕ್ಕೆ ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ ವಠಾರದಿಂದ ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನದವರೆಗೆ ದ್ವಿಚಕ್ರ ವಾಹನ ಜಾಥ ನಡೆಯಿತು. ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ ವಠಾರದಲ್ಲಿ ಈ ವಾಹನ ಜಾಥವನ್ನು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಅಚಾರ ವಿಚಾರಗಳ ಬದಲಾವಣೆಯ ಕಾಲಗಟ್ಟದಲ್ಲಿ ಯುವಕರ ಚಿಂತನೆ ಕೂಡಾ ಬದಲಾಗುತ್ತಿದೆ, ಯುವ ಸಮೂಹ ಉತ್ತಮ ವಿಚಾರಗಳನ್ನು ಚಿಂತನೆ ಮಾಡುತ್ತಾ ದೇಶವನ್ನು ಬಲಿಷ್ಟ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಈ ಸಂದರ್ಭದಲ್ಲಿ ತಿಳಿಸಲು ಸಂತೋಷವಾಗುತ್ತದೆ ಎಂದರು. ದೇಶ ಭಕ್ತಿಯ ಹೋರಾಟಕ್ಕೆ ಈ ಸಂಘಟನೆಗಳ ಪಾತ್ರ ಹೆಚ್ಚು ಮಹತ್ತರವಾದುದು ಎಂದ ಅವರು ಈ ಸಂದರ್ಭ ಭಜರಂಗದಳ ಜಿಲ್ಲಾ ಸಂಚಾಲಕ ಬಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಪ್ರಮುಖ್ ಗುರುರಾಜ್ ಬಂಟ್ವಾಳ್, ಪ್ರಮುಖರಾದ ಪ್ರಕಾಶ್ ಬೆಳ್ಳೂರು, ಸುರೇಶ್ ಬೆಂಜನಪದವು, ಜಿತೇಂದ್ರ ಕೊಟ್ಯಾನ್ ಅಜ್ಜಿಬೆಟ್ಟು, ಸಚಿನ್ ಅಮ್ಮುಂಜೆ, ಧಕ್ಷಣ್ ಸಜೀಪ ಲೋಹಿತ್ ಪನೋಲಿಬೈಲು ಮತ್ತಿತರರು ಉಪಸ್ಥಿತರಿದ್ದರು.