Rajesh Naik

ಕಾವಳಪಡೂರು ಗ್ರಾ.ಪಂ: ಉಜ್ವಲ ಯೋಜನೆಯಡಿ ಫಲಾನುಭವಿಗಳ ವಿತರಣಾ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಉಜ್ವಲ ಯೋಜನೆಯಡಿ ಕಾವಳಪಡೂರು ಗ್ರಾ.ಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಮತ್ತು ಸ್ಟೌವ್ ವಿತರಣೆಯ ಕಾರ್ಯಕ್ರಮವು ವಗ್ಗ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 100ಕ್ಕೂ ಮಿಕ್ಕಿದ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಮತ್ತು ಸ್ಟೌವ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳನ್ನು ಬಂಟ್ವಾಳ ಕ್ಷೇತ್ರದ ಮನೆ ಮನೆಗಳಿಗೆ ತಲುಪಿಸುವಂತದ್ದು ಪಂಚಾಯತ್ ಸದಸ್ಯರ ಮತ್ತು ಪಕ್ಷದ ಕಾರ್ಯಕರ್ತರ ಜವಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಕಾರ್ಯಯಗಾರವನ್ನು ಗ್ರಾಮಮಟ್ಟದಲ್ಲಿ ಮಾಡಿ ಅದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವ ನಿಟ್ಟಿನಲ್ಲಿ ಕಾರ್ಯಯಕ್ರಮ ರೂಪಿಸಲಾಗುವುದು. ಹೊಗೆ ಮುಕ್ತ ಬಂಟ್ವಾಳಕ್ಕೆ ನಾವೆಲ್ಲರು ಶ್ರಮಿಸೋಣ ಅಗಸ್ಟ್ 15ರ ನಂತರ ಉಜ್ವಲ ಪ್ಲಸ್ ಯೋಜನೆ ಅನುಷ್ಟಾನವಾಗಲಿದ್ದು ಸಂಸದ ನಳಿನ್ ಕುಮಾರ್ ಕಟೀಲುರವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ಎಲ್ಲಾ ಬಿಪಿಎಲ್ ಕಾರ್ಡ್‌ದಾರರಿಗೆ ಈ ಯೋಜನೆಯ ಪ್ರಯೊಜನ ದೊರೆಯಲಿದೆ ಈ ನಿಟ್ಟಿನಲ್ಲಿ ಪಂಚಾಯತ್ ಸದಸ್ಯರು ಬಿಪಿಎಲ್ ಕಾರ್ಡ್‌ದಾರರ ಮನೆಯನ್ನು ಸಂಪರ್ಕ ಮಾಡಿ ಅವರ ಅರ್ಜಿಯನ್ನು ಸಮೀಪದ ಗ್ಯಾಸ್ ಏಜೆನ್ಸಿಯವರಿಗೆ ನೀಡಿ ಈ ಯೋಜನೆಯ ಪ್ರಯೋಜನೆ ಪಡೆಯುವಂತೆ ಮಾಡೊಣ ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಕಾವಳಪಡೂರು ಗ್ರಾ.ಪಂ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಉಪಾಧ್ಯಕ್ಷರಾದ ಭವಾನಿ, ಗ್ರಾ.ಪಂ ಸದಸ್ಯರುಗಳಾದ ಸುರೇಶ್ ಸಫಲ್ಯ, ಆನಂದ ಮಧ್ವ, ಭಾಸ್ಕರ, ಸುಜಾತ ಶೆಣೈ, ಇಂದಿರಾ, ಸಂಪಾ ಕಾಡಬೆಟ್ಟು, ಲಕ್ಷ್ಮಿ ಮಧ್ವ, ಕಾವಳ ಮೂಡೂರು ಪಂಚಾಯತ್ ಸದಸ್ಯರಾದ ಮೋಹನ ಆಚಾರ್ಯ, ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿ ಮಾಲಕರಾದ ಕರುಣಾಕರ ಶೆಟ್ಟಿ, ಶ್ರೀ ದುರ್ಗಾ ಗ್ಯಾಸ್ ಏಜೆನ್ಸಿ ಮಾಲಕರಾದ ಪ್ರಭಾಕರ ಶೆಟ್ಟಿ, ಭದ್ರ ಗ್ಯಾಸ್ ಏಜೆನ್ಸಿಯ ಮಂಜುನಾಥ ಆಚಾರ್ಯ, ಕಾವಳಪಡೂರು ಬಿಜೆಪಿ ಪಂಚಾಯತ್ ಸಮಿತಿಯ ಅಧ್ಯಕ್ಷರಾದ ಜಗದೀಶ್ ಕಾಮತ್, ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿಯಾದ ರಮಾನಾಥ ರಾಯಿ ಉಪಸ್ಥಿತರಿದ್ದರು. ಶಿವಪ್ಪ ಗೌಡ ನಿನ್ನಿಕಲ್ಲು ಕಾರ್ಯಯಕ್ರಮ ನಿರೂಪಿಸಿದರು, ಸತೀಶ್ ಶೆಟ್ಟಿ ವಂದಿಸಿದರು.

Ujjwal-kavalapadoor-2

Ujjwal-kavalapadoor-1

Back To Top
Highslide for Wordpress Plugin