ಸುಮಾರು 90% ಹಿಂದುಳಿದ ವರ್ಗದ ಮಕ್ಕಳಿಗೆ ಶ್ರೀರಾಮ ವಿದ್ಯಾಕೇಂದ್ರ ಮತ್ತು ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಉಚಿತ ಊಟ ಮತ್ತು ಸಮವಸ್ತ್ರವನ್ನು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ನೀಡುತ್ತಿತ್ತು. ಮಾತು ಮಾತಿಗೂ ಅಹಿಂದ ಎಂದು ಹೇಳುವ ಸರಕಾರ, ಅಹಿಂದರ ಅಭಿವೃದ್ಧಿ ಎಂದು ಹೇಳುವ ಮಾನ್ಯ ಮುಖ್ಯಮಂತ್ರಿಗಳು ಈ ನಿರ್ಧಾರದಿಂದ ಅಹಿಂದ ಬಡ ಮಕ್ಕಳ ಊಟವನ್ನು ಕಸಿಯುವಂತಹ ಕೆಲಸವನ್ನು ಮಾಡಿದ್ದಾರೆ. ದ್ವೇಶದ ರಾಜಕೀಯಕ್ಕಾಗಿ ಮಕ್ಕಳ ಊಟ ಕಸಿಯುವುದು ಶೋಚನೀಯ ಮತ್ತು ರಾಜ್ಯ ಸರಕಾರಕ್ಕೆ ಶೋಭೆ ತರುವಂತ ಕೆಲಸವಲ್ಲ. ಹಸಿದು ಬಂದವರಿಗೆ ಅನ್ನದಾನ ಮಾಡುವುದು ನಮ್ಮ ಸಂಸ್ಕೃತಿ. ಆದರೆ ರಾಜ್ಯ ಸರಕಾರ ಬಡ ಮಕ್ಕಳ ಅನ್ನವನ್ನು ಕಸಿದು ವಿಕೃತಿ ಮೆರೆದಿದೆ ಎಂದು ಬಿಜೆಪಿ ಮುಂಖಡ ರಾಜೇಶ್ ನಾಯ್ಕ್ ಹೇಳಿದ್ದಾರೆ.