Rajesh Naik

ಬಾಳ್ತಿಲ ಗ್ರಾಮದ ಬೀಡು ಬಸದಿ ರಸ್ತೆ ಕಾಮಗಾರಿ ಉದ್ಘಾಟನೆ

ಬಾಳ್ತಿಲ ಗ್ರಾಮದ ಬೀಡು ಬಸದಿ ರಸ್ತೆಯ ರೂ. 20 ಲಕ್ಷ ಅನುದಾನ ಕಾಮಗಾರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಫಾಟಿಸಿದರು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮ, ಮಾಜಿ ಜಿ.ಪಂ ಸದಸ್ಯ ಆರ್ ಚೆನ್ನಪ್ಪ ಕೋಟ್ಯಾನ್, ಗ್ರಾ.ಪಂ. ಸದಸ್ಯರಾದ ಮೋಹನ್ ಪಿ.ಎಸ್, ವೆಂಕಟ್ರಾಯ ಪ್ರಭು, ವಿಶ್ವನಾಥ ನಾಯ್ಕ, ಶಿವರಾಜ್ ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಯಾಧವ ಪೂಜಾರಿ, ಅರುಣ್ ಪೂಜಾರಿ, ಬ್ರಿಜೇಶ್ ಜೈನ್, ದೀಪಕ್ […]

Read More

ಪರಿಹಾರ ನಿಧಿಯ ಚೆಕ್‌ ವಿತರಣೆ

ಇತ್ತೀಚೆಗೆ ನದಿನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಪೂವಪ್ಪ ಸಪಲ್ಯ ಬಡಗುಂಡಿ ಇವರ ಪತ್ನಿ ಗೋಪಿಯವರಿಗೆ ಪರಿಹಾರ ನಿಧಿಯ ರೂ. 5 ಲಕ್ಷದ ಚೆಕ್‌ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಪ್ರಾಕೃತಿಕ ವಿಕೋಪಕ್ಕೀಡಾದ ಸಂತ್ರಸ್ತರಿಗೂ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್‌ನ್ನು ಶಾಸಕರು ವಿತರಿಸಿದರು. ಈ ಸಂಧರ್ಭದಲ್ಲಿ ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮಕರಣೀಕರಾದ ರಾಜು ಲಂಬಾಣಿ, ಕುಮಾರ್, ಪ್ರವೀಣ್, ಸದಾನಂದ ನಾವೂರು, ಜನಾರ್ಧನ ಕೊಂಬೆಟ್ಟು, ಪ್ರವೀಣ್ ಗಟ್ಟಿ, ನವೀನ್ ಅಂಚನ್, ಸುಮತಿ […]

Read More

ಒಡಿಯೂರು ಗುಡ್ಡ ಕುಸಿತದಿಂದ ಮೃತಪಟ್ಟವರಿಗೆ ಪರಿಹಾರ ಚೆಕ್‌ ವಿತರಣೆ

ಇತ್ತೀಚೆಗೆ ಕರೋಪಾಡಿ ಗ್ರಾಮದ ಒಡಿಯೂರು ಗುಡ್ಡ ಕುಸಿತದಿಂದ ಮೃತಪಟ್ಟವರಿಗೆ ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಹಾರ ನೀಡಲು ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪರವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮನವಿ ಮಾಡಿದ್ದು ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳ ವೇದಿಕೆಯಲ್ಲಿ ಪರಿಹಾರ ಘೋಷಿಸಿದ್ದು ಅದರಂತೆಯೇ ಅವಘಡದಲ್ಲಿ ಮೃತಪಟ್ಟ ವಿಟ್ಲಪಡ್ನೂರು ಗ್ರಾಮದ ಕಾಪುಮಜಲು ನಿವಾಸಿಯಾದ ರಮೇಶ್ ಮಡಿವಾಳ ಎಂಬವರ ಪತ್ನಿ ಮೋಹಿನಿಯವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ. 3 ಲಕ್ಷದ ಪರಿಹಾರದ ಚೆಕ್‌ನ್ನು ಶಾಸಕರ ಕಚೇರಿಯಲ್ಲಿ ಹಸ್ತಾಂತರಿಸಿದರು. ಗಾಯಾಳುಗೆ […]

Read More

ಫಲಾನುಭವಿಗಳಿಗೆ ಶಾಸಕ ನಾಯ್ಕ್ ಚೆಕ್‌ ವಿತರಣೆ

ಪ್ರಾಕೃತಿಕ ವಿಕೋಪ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯ ರೂ. 5,36,377/- ಮೊತ್ತದ, ಒಟ್ಟು 153 ಚೆಕ್‌ಗಳನ್ನು ಫಲಾನುಭವಿಗಳಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕಚೇರಿಯಲ್ಲಿ ವಿತರಿಸಿದರು. ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ತಾ.ಪಂ.ಸದಸ್ಯೆ ಗೀತಾ ಚಂದ್ರಶೇಖರ್ ಉಪಸ್ಥಿತರಿದ್ದರು.

Read More

2019-20 ನೇ ಸಾಲಿನ ಜೇನು ಕೃಷಿ ಕಾರ್ಯಾಗಾರ

ಬಂಟ್ವಾಳ: ತೋಟಗಾರಿಕಾ ಇಲಾಖೆ ಬಂಟ್ವಾಳ ಇದರ ಆಶ್ರಯದಲ್ಲಿ ಹಾಗೂ ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘವ(ನಿ.) ಇದರ ಸಹಯೋಗದೊಂದಿಗೆ 2019-20 ನೇ ಸಾಲಿನ ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಜೇನು ಕೃಷಿ ಕಾರ್ಯಗಾರ ಬಿ. ಸಿ. ರೋಡಿನ ಎಸ್. ಜಿ. ವೈ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಔಷಧೀಯ ಮಹತ್ವದ ಗುಣಗಳಿರುವ, ಜೇನು ಕೃಷಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಇದೆ, […]

Read More

ಜಿಲ್ಲಾ ಮಟ್ಟದ ಕಂದಾಯ ಇಲಾಖೆ ನೌಕರರ ಕ್ರೀಡಾಕೂಟ ಉದ್ಘಾಟನೆ

ಬಂಟ್ವಾಳ: ಸರಕಾರಿ ನೌಕಕರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಬಹಳ ಸಹಕಾರಿಯಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಕಂದಾಯ ಇಲಾಖಾ ಜಿಲ್ಲಾ  ನೌಕಕರ ಸಂಘ(ರಿ.) ದ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ ನೌಕರರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟದ ಉದ್ಘಾಟನೆ ನಡೆಸಿ ಬಳಿಕ ಅವರು ಮಾತನಾಡಿದರು. ಪ್ರತಿಯೊಬ್ಬರು ದೇಹವನ್ನು ದೈಹಿಕವಾಗಿ ದಂಡಿಸಿದಾಗ ಆರೋಗ್ಯ ರಕ್ಷಣೆ ಸಾಧ್ಯ, ಇಂತಹ ಕ್ರೀಡಾಕೂಟಗಳು ಇತರರಿಗೂ ಸ್ಪೂರ್ತಿಯಾಗಲಿ. ಕೆಲಸದ ಜೊತೆ ಕ್ರೀಡೆಯಲ್ಲಿ […]

Read More

ಬಡಗಕಜೆಕಾರು ಗ್ರಾ.ಪಂ. ಕಾಂಗ್ರೆಸ್ ಸದಸ್ಯ ಬಿಜೆಪಿಗೆ ಸೇರ್ಪಡೆ

ಬಡಗಕಜೆಕಾರು ಗ್ರಾಮ ಪಂಚಾಯತಿಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀ ಸುರೇಶ್ ಬಾರ್ದೊಟ್ಟು ಹಾಗೂ ಶ್ರೀ ಯಶವಂತ ಕೋಡ್ಯೆಲು ಇವರುಗಳು ಇಂದು ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂಧರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ., ಕ್ಷೇತ್ರ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಲ್ಲಾ ಪಂಚಾಯಿತ್ ಸದಸ್ಯರಾದ ತುಂಗಪ್ಪ ಬಂಗೇರ,ತಾ.ಪಂ ಸದಸ್ಯರು ರಮೇಶ್ ಕುಡ್ಮೇರು, ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ ಹಾಗೂ ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ […]

Read More

ಬಡಗಬೆಳ್ಳೂರು : ಕಾಂಕ್ರೀಟ್ ರಸ್ತೆ ಉದ್ಘಾಟನೆ

ಬಂಟ್ವಾಳ: ಶಾಸಕರ 1.50 ಕೋಟಿ ವೆಚ್ಚದ ಅನುದಾನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗಬೆಳ್ಳೂರು ಗ್ರಾಮದ ವರಟಿಲ್ ಮುಲಾರಪಟ್ನ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪೊಳಲಿ ಮೂಡಬಿದ್ರೆ ಸಂಪರ್ಕದ ಈ ರಸ್ತೆಗೆ ಕಾಂಕ್ರೀಟಿಕರಣ ಮಾಡುವ ಬಗ್ಗೆ ಈ ಭಾಗದ ನಿವಾಸಿಗಳಿಂದ ಬಹು ಬೇಡಿಕೆ ಇತ್ತು. ಇಲ್ಲಿನ ಜನರ ಬೇಡಿಕೆಗೆ ಅನುಗುಣವಾಗಿ ಕಾಂಕ್ರೀಟ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಜನರ ಸಮಸ್ಯೆಗಳಿಗೆ […]

Read More

ಗ್ರಾಮ ಪಂಚಾಯತಿಗಳ ಬಲವರ್ಧನೆಗೆ ಕ್ರಮ : ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ

ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ತಂದು ಗ್ರಾಮ ಪಂಚಾಯತಿಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ವೈಖರಿಯನ್ನು ರಾಜ್ಯಕ್ಕೆ ಮಾದರಿಯಾಗಿಸಿ ಗ್ರಾಮ ಪಂಚಾಯತಿಗಳನ್ನು ಸಕ್ರಿಯವಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸರಪಾಡಿ ನರಿಕೊಂಬು ಯೋಜನೆಗಳಿಗೆ ಸುಮಾರು 8.4 ಕೋಟಿ ರೂ. ಅನುದಾನ ಬಿಡುಗಡೆ ಆಗಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ […]

Read More

ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಾತಿ ಕೈಬಿಡುವಂತೆ ಉಸ್ತುವಾರಿ ಸಚಿವರಿಗೆ ಒತ್ತಾಯ

ಜಿಲ್ಲೆಯಲ್ಲಿ ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಿ ಮಾಡುತ್ತಿರುವ ಕ್ರಮದ ಬಗ್ಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿದ ಸಂಧರ್ಭದಲ್ಲಿ ಶಾಸಕರು ಸಚಿವರ ಗಮನ ಸೆಳೆದು ಇಲಾಖೆಯ ಈ ಕ್ರಮದಿಂದ ಬಡವರ್ಗದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ಮಾತುಕತೆ ನಡೆಸಿ […]

Read More

Back To Top
Highslide for Wordpress Plugin