Rajesh Naik

ಮುಂದಿನ ದಿನಗಳು ಭಾರತೀಯ ಜನತಾ ಪಕ್ಷದ ದಿನಗಳು – ಎನ್.ಯೋಗಿಶ್ ಭಟ್

ಬಂಟ್ವಾಳ: ನೂರು ವರ್ಷಗಳ ಹಿಂದೆ ಪೇಶಾವರದ ಮುಸ್ಲಿಂಸಂತ ಮೇವಾಡದ ರಾಜನಿಗೆ ಹೇಳಿದ ಭವಿಷ್ಯವಾಣಿ ಮುಂದಿನ ಚುನಾವಣೆಯಲ್ಲಿ ಅಕ್ಷರಶಃ ನಿಜವಾಗಲಿದೆ, ಆ ಪ್ರಕಾರ ನರೇಂದ್ರ ಮೋದಿಯೇ ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ವಿಧಾನ ಸಭೆಯ ಮಾಜಿ ಉಪಸಭಾಪತಿ ಎನ್.ಯೋಗಿಶ್ ಭಟ್ ಹೇಳಿದ್ದಾರೆ.ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 11 ನೇ ದಿನವಾದ ಶುಕ್ರವಾರ ಸಂಜೆ ಪಂಜಿಕಲ್ಲು ಗ್ರಾಮ ಆಚಾರಿ ಪಲ್ಕೆ ಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

panjikallu-padaytre6
ಆ ಸಂತ ಹೇಳಿದ ಮಾತುಗಳು ಈ ವರೆಗೆ ಎಲ್ಲವೂ ನಿಜವಾಗಿದ್ದು, ಸಂತವಾಣಿಯಂತೆ ದೇಶದ ಮುಂದಿನ ದಿನಗಳು ಭಾರತೀಯ ಜನತಾ ಪಕ್ಷದ ದಿನಗಳು ಎಂದ ಅವರು, ಮೋದಿಯೇ ಈ ದೇಶದ ಪ್ರಧಾನಿಯಾಗಬೇಕೆಂಬ ಜನಸಾಮಾನ್ಯರ ಆಸೆ ಭದ್ರವಾಗಿ ನೆಲೆಯೂರುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ, ಮಾಧ್ಯಮಗಳು ನೀಡಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಇವನ್ನು ಸಾಬೀತು ಪಡಿಸಿದೆ ಎಂದರು.ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿಕೆ ಭಟ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಕ್ಷದೊಳಗಿನ ರಾಜ್ಯಮಟ್ಟದ ಗೊಂದಲದಿಂದ ಬಿಜೆಪಿಗೆ ಹಿನ್ನಡೆಯಾಗಿತ್ತು, ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವೆಲ್ಲವುಗಳನ್ನು ಮರೆತು ನರೇಂದ್ರ ಮೋದಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು. ಅಡಿಕೆ ಕೊಳೆ ರೋಗದ ಸಂತ್ರಸ್ತ ಕೃಷಿಕರಿಗೆ ಪರಿಹಾರ ನೀಡುವಲ್ಲಿಯೂ ಕಾಂಗ್ರೇಸ್ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.

ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ “ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್ ನೆತ್ರಕೆರೆ . ಗ್ರಾ.ಪಂ. ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿದರು.

ಪಕ್ಷದ ಪ್ರಮುಖರಾದ ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ, ಪೃಥ್ವಿರಾಜ್, , ರೊನಾಲ್ಡ್ ಡಿಸೋಜ ಅಮ್ಟಾಡಿ , ದಿನೇಶ್ ಅಮ್ಟೂರು, ಅಬ್ದುಲ್ ರಝಾಕ್, ರೇವತಿ, ವಸಂತ ಅಣ್ಣಳಿಕೆ, ಕರುಣೆಂದ್ರ ಪೂಜಾರಿ, ಹರೀಶ್ ಗಟ್ಟಿ, ನೋಣು ಶೆಟ್ಟಿ, ಧರ್ಣಪ್ಪ ಸಫಲ್ಯ ಮತ್ತಿತರರು ಉಪಸ್ಥಿತರಿದ್ದರು. ಮೋಹನ್‌ದಾಸ್ ನೂಜಂತೋಡಿ ಸ್ವಾಗತಿಸಿದರು, ಕೇಶವ ದಡ್ಡಲಕಾಡು ವಂದಿಸಿದರು. ಮಂಜುನಾಥ ದೆಚ್ಚಾರು ಕಾರ್ಯಕ್ರಮ ನಿರ್ವಹಿಸಿದರು.

Back To Top
Highslide for Wordpress Plugin