ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸಂಸದ ಹಾಗೂ ಉಸ್ತುವಾರಿ ಸಚಿವರ ಜೊತೆ ನಿಯೋಗಯೊಂದಿಗೆ ಭೇಟಿ ಮಾಡಿ ತಾಲೂಕಿನಲ್ಲಿ ಪಾಕೃತಿಕ ವಿಕೋಪದಲ್ಲಿ ಉಂಟಾದ ಮನೆ ಹಾಗೂ ಕೃಷಿ ಹಾನಿಯ ಬಗ್ಗೆ ಅವರ ಗಮನಕ್ಕೆ ತಂದು ವಿಶೇಷ ಪರಿಹಾರ ನೀಡುವಂತೆ ಒತ್ತಾಯ ಮಾಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಆ.2 ರಂದು ಶನಿವಾರ ಸಂಜೆ ವೇಳೆ ಸುರಿದ ಸಿಡಿಲು ಸಹಿತ ಸುಂಟರಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ನಾಲ್ಕು ಗ್ರಾಮಗಳಾದ ಕಾವಳಮೂಡೂರು, ಬಡಗಕಜೆಕಾರು, ಉಳಿ, ತೆಂಕಕಜೆಕಾರು ಗ್ರಾಮಗಳಲ್ಲಿ ರೈತರ ಕೃಷಿಗೆ ತೀವ್ರವಾಗಿ ಹಾನಿಯಾಗಿದ್ದು ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಿಸಿದ ರೈತರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ತಾಲೂಕಿನಲ್ಲಿ ಹಾನಿಯಾದ ಕೃಷಿಯ ಬಗ್ಗೆ ಹಾಗೂ ನಷ್ಟದ ಅಂದಾಜುಪಟ್ಟಿಯನ್ನು ಶೀಘ್ರವಾಗಿ ತಯಾರಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು. ರೈತರಿಗೆ ನಷ್ಟವುಂಟಾದ ಬಗ್ಗೆ ನೋವಾಗಿದೆ ಎಂದ ಅವರು ವಿಶೇಷ ಪರಿಹಾರದ ಒದಗಿಸಿಕೊಡುವ ಬಗ್ಗೆ ಮುಖ್ಯ ಮಂತ್ರಿ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ತಾಲೂಕಿನಲ್ಲಿ ಸುಮಾರು 30 ಸಾವಿರಕ್ಕೂ ಮಿಕ್ಕಿ ಫಲನೀಡುವ ಅಡಿಕೆ ಮರ , ಸಾವಿರಾರು ತೆಂಗಿನ ಮರ, ಲಕ್ಷಾಂತರ ರೂ. ಬೆಲೆ ಬಾಳುವ ವಿವಿಧ ಜಾತಿಯ ಮರಗಳು, 100 ಕ್ಕೂ ಅಧಿಕ ವಾಸದ ಮನೆಗಳಿಗೆ ಸುಂಟರಗಾಳಿಯಿಂದ ಹಾನಿಯಾಗಿರುವ ಬಗ್ಗೆ ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಮೆಸ್ಕಾಂ ಇಲಾಖೆಗೂ ನಷ್ಟವುಂಟಾಗಿದೆ.
ಕಾವಳಮೂಡೂರು ಗ್ರಾಮದ ಕೊಡಂಬೆಟ್ಟು ರಾಘವೇಂದ್ರ ಭಟ್ ,ವಾಸುದೇವ ಆಚಾರ್ಯ, ಶಂಕರ್ ಐತಾಳ್, ರವಿಪ್ರಕಾಶ್ ಐತಾಳ್, ಹರೀಶ್ ಪ್ರಭು, ರತ್ನಾಕರ್ ಪ್ರಭು, ಪದ್ಮ ನಾಭ ನಾಯಕ್, ಪಾಂಡವರಕಲ್ಲು ಕೂಮಿನಡ್ಕ ವ್ಯಾಪ್ತಿಯ ಸಾಧಿಕ್, ಇಬ್ರಾಹಿಂ, ಬಾಲಕೃಷ್ಣ, ಪದ್ಮಾವತಿ, ಶರೀಫ್, ಅಬ್ದುಲ್ ಖಾದರ್ ನೂರ್ ಜಾನ್, ನಸೀಮಾ, ಪದ್ಮಾವತಿ, ಉಳಿ ಗ್ರಾಮದ ಶ್ರೀನಿವಾಸ ಅರ್ಮೂಡತ್ತಾಯ, ಲಲಿತಾಗಣೇಶ್ ಪೂಜಾರಿ, ಅಂಬುಜಾಕ್ಷಿ ಅವರ ಕೃಷಿಗೆ ತೀವ್ರವಾಗಿ ಹಾನಿಯಾಗಿದ್ದು ಶಾಸಕ ರಾಜೇಶ್ ನಾಯ್ಕ್ ಅಧಿಕಾರಿ ಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಜಯಲಕ್ಮೀ ದೇವಾಡಿಗ, ಉಪಾಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಸದಸ್ಯ ಶೇಷಗಿರಿ ಪೂಜಾರಿ, ಪ್ರಶಾಂತ್ ಶೆಟ್ಟಿ, ರಾಜ್ ಗೋಪಾಲ ನಾಯಕ್ , ರೇವತಿ, ವೀಣಾ,ಗಣೇಶ್ ದೇವಾಡಿಗ, ಬಡಗಕಜೆಕಾರ್ ಗ್ರಾ.ಪಂ ., ಆಶ್ಮಾ, ಸದಸ್ಯರಾದ ಸತೀಶ್ ಬಂಗೇರ, ಸುಗಂಧಿ ಮಾಡ, ಉಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಮೈರ, ಉಪಾಧ್ಯಕ್ಷ ಚಿದಾನಂದ ರೈ, ಸದಸ್ಯ ರಾದ ಚೇತನ್ , ವಸಂತ, ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ಗಳಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ,ಉಪಾಧ್ಯಕ್ಷ ಚಿದಾನಂದ ರೈ, ಕೋಶಾಧಿಕಾರಿ ಪ್ರಕಾಶ್ ಅಂಚನ್, ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು,
ತೋಟಕಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ, ಪಂ.ರಾಜ್ .ಇಂಜಿನಿಯರ್ ಕೃಷ್ಣ, ಕಂದಾಯ ವೃತ್ತ ನಿರೀಕ್ಷಕ ಕುಮಾರ್, ಕಾವಳಮೂಡೂರು ಪಂ.ಅಭಿವೃದ್ದಿ ಅಧಿಕಾರಿ ರಚನ್, ಗ್ರಾಮ ಕರಣೀಕೆ ಆಶಾ ಮೆಹಂದಲೆ, ಬಡಗಕಜೆಕಾರ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಕಿ, ಗ್ರಾಮ ಕರಣೀಕೆ ನಿಶ್ಮಿತ ಗ್ರಾಮ ಸಹಾಯಕ ಅಬ್ದುಲ್ ರಹಮಾನ್ ಪ್ರಮುಖರಾದ ವೆಂಕಟರಮಣ ಮುಚ್ಚಿಣ್ಣಾಯ, ಮೋಹನ್ ಆಚಾರ್ಯ, ಕಾರ್ತಿಕ್ ಬಲ್ಲಾಳ್, ಹರೀಶ್ ಪ್ರಭು, ಅಶ್ವಥ್ ಬಾಳಿಕೆ, ಮೋಹನಾಂದ, ರೋಹಿನಾಥ ಕರ್ಬೆಡ್ಕ, ತಾರನಾಥ ಪೆರಂಪಾಡಿ, ಲೋಹಿತ್ ಪೂಜಾರಿ ಉಪಸ್ಥಿತರಿದ್ದರು.