Rajesh Naik

ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಬಂಟ್ವಾಳ ಶಾಸಕರ ರೂ. 50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಗ್ರಿ ಭಜನಾ ಮಂದಿರದ ಬಳಿ ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿ, ಸರಕಾರದ ಅನುದಾನಗಳ ಮೂಲಕ ಗ್ರಾಮದ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಗೆ ಮೊದಲ ಆಧ್ಯತೆ ನೀಡಲಾಗುತ್ತದೆ ‌ಎಂದರು. ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿಗೆ ಗ್ರಾಮಸ್ಥರ ಒಗ್ಗಟ್ಟಿನ ಸಹಕಾರ ಸದಾ ಇರಲಿ ಎಂದು ಹೇಳಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಅವರು ಮಾತನಾಡಿ ಯುವ ಸಮುದಾಯದ ಸಹಕಾರ ಮನೋಭಾವ ಹಾಗೂ ಕ್ರಿಯಾಶೀಲ ಕೆಲಸ ಧಾರ್ಮಿಕ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಅವರು ಹೇಳಿದರು.

ಕ್ಷೇತ್ರಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ ಹೆಗ್ಗಳಿಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ. ಬಿಜೆಪಿ ಅಧ್ಯಕ್ಷ ಪೂಜಾರಿ,ಅವರು ಮುಖ್ಯ ಅತಿಥಿಯಾಗಿ ಶುಭಹಾರೈಸಿದರು. ಶ್ರೀಶಾರದ ಭಜನಾ ಮಂದಿರದ ಅಧ್ಯಕ್ಷ ರತ್ನಾಕರ್ ನಾಡಾರ್, ಅವರು ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ‌, ಅದ್ಯಕ್ಷೆ ಹರಿಣಾಕ್ಷಿ,ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ ಸಜೀಪ,ಸಂಜೀವ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಅಗಲಿಬೆಟ್ಟು, ಪ್ರಶಾಂತ್ ಪೂಜಾರಿ ವಿಟ್ಲುಕೋಡಿ, ಸುಂದರಿ, ಶೋಭಾ ಶೆಟ್ಟಿ, ವಿಶ್ವನಾಥ ಬೆಳ್ಚಾಡ, ಆಶೋಕ್, ಕುಶಾಲಕ್ಷ, ಸೋಮನಾಥ ಬಂಗೇರ, ಪ್ರಮುಖ ರಾದ ಯಶವಂತ ದೇರಾಜೆ, ಸುರೇಶ್ ಪೂಜಾರಿ ಸಾರ್ಥವ, ಆನಂದ ಶಂಭೂರು, ಯಶೋಧರ ಕರ್ಬೆಟ್ಟು, ಶಿವಪ್ರಸಾದ್ ಶೆಟ್ಟಿ, ಗಣಪತಿ ಭಟ್ ಕೋಮಾಲಿ, ಉದಯಕುಮಾರ್ ಕಾಂಜಿಲ, ಶೋಬಿತ್ ಪೂಂಜ, ಸುಂದರ ಪೂಜಾರಿ, ಶೈಲೇಶ್ ಪೂಜಾರಿ, ಮೋಹನ್ ದಾಸ್ ಮತ್ತಿತರ ಊರ ಗಣ್ಯರು ಹಾಗೂ ಭಜನಾ ಮಂಡಳಿ ಸರ್ವಸದಸ್ಯರು ಉಪಸ್ಥಿತರಿದ್ದರು.

ಸಮುದಾಯ ಭವನಕ್ಕೆ ಶ್ರಮಿಸಿದ ಯಶವಂತ ನಾಯ್ಕ ನಗ್ರಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಶ್ರೀಶಾರದ ಭಜನಾ ಮಂದಿರದ ಆದ್ಯಕ್ಷ ರತ್ನಾಕರ್ ನಾಡಾರ್ ಸ್ವಾಗತಿಸಿದರು. ಶಾರದ ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್ ವಂದಿಸಿದರು. ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Back To Top
Highslide for Wordpress Plugin