Rajesh Naik

ಗ್ರಾ.ಪಂ. ಚುನಾವಣೆಯಲ್ಲಿ ಕ್ಷೇತ್ರ ರೈತ ಮೋರ್ಚಾದ ಪಾತ್ರ ನಿರ್ಣಯಕ : ಶಾಸಕ ರಾಜೇಶ್ ನಾಯ್ಕ್

ಕಳೆದ 70 ವರ್ಷಗಳಿಂದ ದೇಶವನ್ನಳಿದ ಯಾವುದೇ ಸರ್ಕಾರಗಳು ರೈತರಿಗೆ ಬೇಕಾದ ಯೋಜನೆಗಳನ್ನ ಜಾರಿ ಮಾಡದೇ ರೈತರನ್ನು ಶೋಷಣೆ ಮಾಡಿ ರೈತರನ್ನ ಬೀದಿ ಪಾಲು ಮಾಡಿದ್ದು, ಆದರೆ ಕಳೆದ 6 ವರ್ಷಗಳಿಂದ ಕೇಂದ್ರ ಸರ್ಕಾರ ನರೇಂದ್ರ ಮೋದಿ ನೇತೃತ್ವದಲ್ಲಿ ರೈತರಿಗೆ ವಿಶೇಷ ಯೋಜನೆಗಳು ಜಾರಿ ಮಾಡಿ ರೈತರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ನಿರ್ಮಾಣವಾಗಿದೆ. ರೈತರಿಂದಲೇ ಇಡೀ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತುಂಗದಲ್ಲಿರುತ್ತದೆ. ಎ.ಪಿ.ಎಂಸಿ ಕಾಯ್ದೆಗೆ ತಿದ್ದುಪಡಿಯಿಂದ ರೈತರಿಗೆ ತುಂಬಾ ಅನುಕೂಲವಾಗಿದೆ. ಒಟ್ಟಾರೆ ದೇಶದಲ್ಲಿನ ರೈತರ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಮೋದಿ ಸರ್ಕಾರ ಯೋಜನೆ ಜಾರಿಗೆ ತಂದಿದೆ. 70% ರೈತರಿಂದ ಭಾರತ ಬಲಿಷ್ಠಗೊಳ್ಳತ್ತಿದೆ. ಬಲಿಷ್ಠ ನಾಯಕತ್ವದಿಂದ ದೇಶ ಹಾಗೂ ವಿದೇಶದಲ್ಲಿ ಭಾರತೀಯರಿಗೆ ಗೌರವ ಸಿಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಕ್ಷೇತ್ರ ರೈತ ಮೋರ್ಚಾದಿಂದ ಆಗಬೇಕು. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಪಂಚಾಯತ್‌ನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕ್ಷೇತ್ರ ರೈತ ಮೋರ್ಚಾ ನಿರ್ಣಾಯಕ ಪಾತ್ರ ವಹಿಸಬೇಕೆಂದು ತಿಳಿಸಿದರು. ಅವರು ಬಂಟ್ವಾಳ ಬಿ.ಜೆ.ಪಿ ಮಂಡಲ ರೈತ ಮೋರ್ಚಾದ ಪದಾಧಿಕಾರಿಗಳ ಪದಗ್ರಹನ ಸಭೆ ಉದ್ಗಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ, ರೈತ ಮೋರ್ಚಾದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ, ಪ್ರ.ಕಾರ್ಯದರ್ಶಿಗಳಾದ ಶಿವಪ್ಪ ಗೌಡ, ಹರೀಶ್ ಬೇಡಗುಡ್ಡೆ, ಜಿಲ್ಲಾ ರೈತ ಮೋರ್ಚಾದ ಪ್ರ.ಕಾರ್ಯದರ್ಶಿಗಳಾದ ವಸಂತ ಅಣ್ಣಳಿಕೆ, ರಾಘವೇಂದ್ರ ಭಟ್, ಉಪಾಧ್ಯಕ್ಷರಾದ ವಿಜಯ ರೈ, ಕಾರ್ಯದರ್ಶಿಗಳಾದ, ಸಂಜೀವ ಪೂಜಾರಿ, ಪುರುಷೋತ್ತಮ ಮಜಲು, ಹಾಗೂ ರೈತ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Back To Top
Highslide for Wordpress Plugin