Rajesh Naik

ನಡಿಯೇಲು ದೈಯಂಗಳು ಉಳ್ಳಾಲ್ತಿ ಅಮ್ಮ ಭಂಡಾರದ ಮನೆಯ ನೂತನ ಗೋಪುರ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಊರ ಪರ ಊರ ದಾನಿಗಳ ಸಹಕಾರದಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ಸಜೀಪ ಮಾಗಣೆಗೆ ಸಂಬಂಧಿಸಿದ ಸಜೀಪ ಮೂಡ ಗ್ರಾಮದ ಸಂಕೇಶ ಎಂಬಲ್ಲಿರುವ ನಡಿಯೇಲು ದೈಯಂಗಳು ಉಳ್ಳಾಲ್ತಿ ಅಮ್ಮ ಮತ್ತು ನಾಲ್ಕೈತ್ತಾಯ ದೈವಗಳ ಭಂಡಾರದ ಮನೆಯ ನೂತನ ಗೋಪುರ ನಿರ್ಮಾಣಕ್ಕೆ ಇಂದು ಬೆಳಿಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೇರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ.ಜಿ.ಪಂ.ಆದ್ಯಕ್ಷ ಸಜೀಪ ಮಾಗಣೆಯ ಮುಖ್ಯಸ್ಥ ಸದಾನಂದ ಪೂಂಜಾ, ಗಡಿ ಪ್ರಧಾನರಾದ ಕಾಂತಾಡಿಗುತ್ತು ಬರಂಗರೆ ಗಣೇಶ ನಾಯ್ಕ್ ಯಾನೆ ಉಗ್ಗಶೆಟ್ಟಿ, ಸಜೀಪ ಗುತ್ತು ಗಡಿ ಪ್ರಧಾನ ರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

shilanyasa

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸದಾನಂದ ಪೂಂಜಾ ಅವರು ದ.ಕ.ಜಿಲ್ಲೆಯಲ್ಲಿ ಆರಾಧಿಸಲ್ಪಡುವ ಅನೇಕ ಕ್ಷೇತ್ರಗಳಿವೆ. ಆದರೆ  ಸಜೀಪ ಮೂಡದ ಸಂಕೇಶ ಭಂಡಾರದ ಮನೆಯಲ್ಲಿ ಅರಾಧಿಸುವ ಉಳ್ಳಾಲ್ತಿ ಕ್ಷೇತ್ರ ವೈಶಿಷ್ಟ್ಯತೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಈ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಶ್ರೀಕಾಂತ ಶೆಟ್ಟಿ, ಸಂಕೇಶ, ಪ್ರಮುಖರಾದ ಸುಬ್ರಹ್ಮಣ್ಯ ಭಟ್, ವೆಂಕಟೇಶ್ ಭಟ್, ಜಯಶಂಕರ ಬಾಸ್ರಿತ್ತಾಯ, ನಗ್ರಿಗುತ್ತು ಜಯರಾಮ ಶೆಟ್ಟಿ, ಸಂಕಪ್ಪ ಶೆಟ್ಟಿ ಪಾಲಮಂಟಪ ಮನೆ, ಬಿಜಾಂದರ್ ಗುತ್ತು ಶಿವರಾಮ ಭಂಡಾರಿ, ಯಶವಂತ ದೇರಾಜೆ, ದೇವಿಪ್ರಸಾದ ಪೂಂಜಾ ಉಪಸ್ಥಿತರಿದ್ದರು. ಮಾಜಿ ಜಿ.ಪಂ.ಅದ್ಯಕ್ಷ ಸದಾನಂದ ಪೂಂಜಾ ಸ್ವಾಗತಿಸಿ, ಶಿವಪ್ರಸಾದ್ ಮಾಸ್ಟರ್ ವಂದಿಸಿದರು.

Back To Top
Highslide for Wordpress Plugin