Rajesh Naik

ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಬಂಟ್ವಾಳ: ಕೇಂದ್ರ ಸಣ್ಣ ನೀರಾವರಿ ಸಚಿವ ರಮೇಶ್ ಜಿಗಜಿಣಗಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ರೂ. 36 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ರೂ. 18 ಕೋಟಿ ವೆಚ್ಚದಲ್ಲಿ ನರಿಕೊಂಬು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ವೀಕ್ಷಣೆ ನಡೆಸಿದರು.

ಬಳಿಕ ಮಾತನಾಡಿದ ಅವರು ಸಂಗಬೆಟ್ಟು ಎಂಬಲ್ಲಿ ಈಗಾಗಲೇ ಪೂರ್ಣಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಹಳಷ್ಟು ಉತ್ತಮವಾಗಿದೆ, ಆದರೆ ಬೇಸಿಗೆ ಕಾಲದಲ್ಲಿ ಇಲ್ಲಿನ ಪಲ್ಗುಣಿ ನದಿಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಈ ನೀರಿನ ಸಮಸ್ಯೆ ನೀಗಿಸಲು ರೂ. 5 ಕೋಟಿ ವೆಚ್ಚದ ಹೊಸ ಡ್ಯಾಂ ನಿರ್ಮಾಣದ ಬೇಡಿಕೆ ಸಲ್ಲಿಕೆಯಾಗಿದೆ ಮುಂದಿನ ಬಜೆಟ್ ನಲ್ಲಿ ಹಣ ಬಿಡುಗಡೆಯಾದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದರು.

ನಿರ್ಮಾಣ ಹಂತದಲ್ಲಿರುವ ನರಿಕೊಂಬು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಯನ್ನು ಮಾರ್ಚ ಒಳಗಡೆ ಮುಗಿಸಲು ಸೂಚಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸರ್ವೆ ಕಾರ್ಯ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ರಸ್ತೆಯ ಇನ್ನೊಂದು ಬದಿಯ ಹಳ್ಳಿಗಳ ಮನೆಗಳಿಗೆ ನೀರು ನೀಡಲು ಸದ್ಯಕ್ಕೆ ಸಾಧ್ಯವಿಲ್ಲ, ಹಾಗಾಗಿ ರಸ್ತೆಯ ಈ ಬದಿಯಲ್ಲಿ ಇರುವ ಹಳ್ಳಿಗಳಿಗೆ ಮಾರ್ಚ ಬಳಿಕ ನೀರು ಕೊಡುವ ವ್ಯವಸ್ಥೆ ಮಾಡಲು ತಿಳಿಸಿದ್ದೇನೆ ಎಂದು ಅವರು ಹೇಳಿದರು.

ತಪ್ಪು ತಿಳಿವಳಿಕೆ:
ರಾಜ್ಯ ಸರಕಾರದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರಕಾರ ಸರಿಯಾಗಿ ಅರ್ಧ ಪಾಲು ಹಣ ನೀಡುತ್ತದೆ , ಆದರೆ ರಾಜ್ಯ ಸರಕಾರ ಮಾತ್ರ ಎಲ್ಲೂ ಹೇಳದೆ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಕೇಂದ್ರ ಸರಕಾರ ನೀಡುವ ಹಣದ ಬಗ್ಗೆ ಇವರಿಗೆ ಹೇಳಲು ಏನು ನಾಚಿಕೆ ಎಂದು ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿ ಗುತ್ತು, ಜಿ.ಪಂ.ಅಧ್ಯಕ್ಷೆ ಮೀನಾಕ್ಷೀ ಶಾಂತಿಗೂಡು, ನರಿಕೊಂಬು ಗ್ರಾ.ಪಂ.ಅದ್ಯಕ್ಷ ಯಶೋಧರ, ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ.ಪೂಜಾರಿ, ತಾ.ಪಂ ಸದಸ್ಯ ಪ್ರಭಾಕರು ಪ್ರಭು, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಅನಂದ ಶಂಭೂರು, ಸುರೇಶ್, ರಮಾನಾಥ ರಾಯಿ, ಬಿ. ಉಶೋದ , ಕಿಶೋರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

bahugram-ramesh-jig-3

bahugram-ramesh-jig-1

bahugram-ramesh-jig-2

Back To Top
Highslide for Wordpress Plugin