Rajesh Naik

ಅ. 29 ರಂದು ನಡೆಯುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ: ಕೋಟ ಶ್ರೀನಿವಾಸ ಪೂಜಾರಿ

ಬಂಟ್ವಾಳ:  ಅ. 29  ರಂದು ನಡೆಯುವ  ಸ್ಥಳೀಯ ಚುನಾವಣೆಯಲ್ಲಿ  ಎಲ್ಲಾ ಕ್ಷೇತಗಳಲ್ಲಿಯೂ ಭಾರತೀಯ ಜನತಾಪಾರ್ಟಿಯ ಅತ್ಯಂತ ಸಮರ್ಥ ಮತ್ತು ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೆ ಹಾಗೂ ಸ್ಪಷ್ಟ ಬಹುಮತ ಪಡೆಯುತ್ತೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು. ಅವರು ಬಿಸಿರೋಡಿನ ಪಕ್ಷದ ಕಚೇರಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಾಸಕರ ಪರಿಶ್ರಮ ಹಾಗೂ ಬಿಜೆಪಿ ಪಕ್ಷದ ಸಂಘಟನೆಯ ಮೂಲಕ ಈ ಬಾರಿ ಬಂಟ್ವಾಳ ಪುರಸಭೆಯ  ಚುನಾವಣೆಯಲ್ಲಿ ಅತ್ಯಧಿಕ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷ ಗಳಲ್ಲಿ ಕಾಂಗ್ರೇಸ್ ಪಕ್ಷ ಅತ್ಯಂತ ಕೆಟ್ಟದಾಗಿ ಆಡಳಿತ ನಡೆಸಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
ಅಸಮರ್ಪಕ ತ್ಯಾಜ್ಯ ನಿರ್ವಹಣೆ , ಚರಂಡಿ ಅವ್ಯವಸ್ಥೆಯಿಂದ ಪುರಸಭಾ ನಿವಾಸಿಗಳು ಬೆಸತ್ತು ಹೋಗಿದ್ದಾರೆ. ಹಾಗಾಗಿ ಈ ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸಮರ್ಥ ಅಭ್ಯರ್ಥಿಗಳು ಅಧಿಕಾರಕ್ಕೆ ಗೆಲುವು ಸಾಧಿಸಿದರೆ ಪುರಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತೆ ಎಂದರು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪರಸಭಾ ಚುನಾವಣೆಯಲ್ಲಿ ಯೋಚಿಸಿ ಬಿಜೆಪಿ ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಗೆ ಆಗ್ರಹ: ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ರಾಜಕಾರಣ ಚಟುವಟಿಕೆ ನೋಡುವಾಗ ಆಶ್ಚರ್ಯವಾಗುತ್ತೆ ಎಂದರು. ಪ್ರತಿ ಕ್ಷೇತ್ರದಲ್ಲಿ ಶಾಸಕರ ನೇತ್ರತ್ವದಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುತ್ತೆ ಆದರೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಹಕ್ಕು ಪತ್ರ ವಿತರಣೆ ಮಾಡದಂತೆ ಜಿಲ್ಲಾಧಿಕಾರಿ ತಡೆ ಹಿಡಿಯಲು ಆದೇಶ ಮಾಡಿರುವುದು ಯಾವ ನ್ಯಾಯ ಎಂದರು.
ಹಕ್ಕು ಪತ್ರ ವಿತರಣೆ ಮಾಡದಂತೆ ತಡೆ ಹಿಡಿಯುವ ಮೂಲಕ ಜಿಲ್ಲಾಧಿಕಾರಿ ಅವರು ಶಾಸಕರ ಹಕ್ಕುಚ್ಯು ತಿ ಮಾಡಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ಶೀಘ್ರವಾಗಿ ಜಿಲ್ಲಾಧಿಕಾರಿಯವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಕ್ಕುಪತ್ರ ವಿತರಣೆ ಮಾಡುವ ಕೆಲಸ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪ್ರಮುಖರಾದ ಸುಲೋಚನ ಜಿ.ಕೆ ಭಟ್. ದೇವದಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
coorporation-election-kota
Back To Top
Highslide for Wordpress Plugin