Rajesh Naik

ವನಮಹೋತ್ಸವ ಕಾರ್ಯಕ್ರಮ

ಬಂಟ್ಬಾಳ : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಬಂಟ್ವಾಳ ಪ್ರಾದೇಶಿಕ ವಲಯ ಹಾಗೂ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜ್ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಕಾಲೇಜಿನ ವಠಾರದಲ್ಲಿ ಮಂಗಳವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾಲೇಜಿನ ವಠಾರದಲ್ಲಿ‌ ಗಿಡ  ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಸ್ವಾರ್ಥಕ್ಕಾಗಿ ಪಕೃತಿ‌ ಮೇಲೆ ನಿರಂತರ ದಾಳಿಗಳನ್ನು ನಡೆಯುತ್ತಿದೆ. ಪರಿಸರದ ಜೊತೆ ಮಾತನಾಡಿ, ಅದರ ಜೊತೆ ಸಂಬಂಧ ಬೆಳೆಸಿ, ನೆಟ್ಟ  ಗಿಡಕ್ಕೆ ತಮ್ಮ ಮಕ್ಕಳ ಹೆಸರಿಟ್ಟು ಪೋಷಣೆ ಮಾಡಿ ಎಂದು ಸಲಹೆ ನೀಡಿದರು. ಪರಿಸರ ನಾಶವಾದರೆ ಮನುಕುಲವೇ ನಾಶವಾಗುತ್ತವೆ.    ಬುದ್ಧಿ ಜೀವಿ ಎಂದೆನಿಸುರುವ ಮನುಷ್ಯ ಶ್ರೀಮಂತಿಕೆಗಾಗಿ ಅರಣ್ಯವನ್ನು ನಾಶಮಾಡುತ್ತಿದ್ದಾನೆ. ಇದು ಮುಂದಿನ ದಿನಗಳಲ್ಲಿ ವಿನಾಶದಂಚಿಗೆ ಹೋಗುವ ಮುನ್ಸೂಚನೆಯಾಗಿದೆ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರ ಮಾತನಾಡಿ, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಇಲಾಖೆಯು ಅರಣ್ಯ ಪ್ರದೇಶದಿಂದ ಹೊರಬಂದು ಪಟ್ಟಣ ಪ್ರದೇಶಗಳಲ್ಲಿ ಗಿಡನೆಡುವ ಕಾರ್ಯಕ್ರಮ ಅಭಿಯಾನ ಹಮ್ಮಿಕೊಂಡಿದೆ. ಮಂಗಳೂರುನಂತಹ ಪ್ರದೇಶದಲ್ಲಿ ಕೇವಲ 26% ರಷ್ಟು ಮಾತ್ರ ಮರಗಳನ್ನು ಕಾಣಬಹುದಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಈ ಮರಗಳೂ ನಾಶವಾಗಲಿದೆ ವಿಷಾದಿಸಿದರು. ಅರಣ್ಯ ಇಲಾಖೆಯೊಂದಿಗೂ ಸಾರ್ವಜನಿಕರೂ ಕೂಡಾ ಕೈಜೊಡಿಸಬೇಕು ಎಂದರು.
ವೇದಿಕೆಯಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾಪಂ ಸದಸ್ಯ ಯಶ್ವಂತ್, ಕಾಲೇಜಿನ ಸಹ ಪ್ರಾಧ್ಯಾಪಕ ಆನಂದ್ ಕೃಷ್ಣ ಕಾಮತ್ ವಂದಿಸಿದರು. ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ನಿರೂಪಿಸಿದರು.
canara-engg-colg-vanamahotsava
Back To Top
Highslide for Wordpress Plugin