Rajesh Naik

ಬಿಜೆಪಿ ಬಡಗಬೆಳ್ಳೂರು ಪಂಚಾಯತ್ ಸಮಿತಿ ವತಿಯಿಂದ ಅಭಿನಂದನಾ ಸಭೆ

ಬಂಟ್ವಾಳ: ನೂತನವಾಗಿ  ಆಯ್ಕೆಯಾದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ  ಶಾಸಕ ಉಳಿಪ್ಪಾಡಿ ಗುತ್ತು ರಾಜೇಶ್ ನಾಯ್ಕ್ ಅವರಿಗೆ ಮತ್ತು ಮತ ನೀಡಿದ ಗೆಲುವಿಗೆ ಶ್ರಮಿಸಿದ ಮತದಾರರಿಗೆ  ಹಾಗೂ ಕಾರ್ಯಕರ್ತರಿಗೆ ಭಾರತೀಯ ಜನತಾ ಪಾರ್ಟಿ ಬಡಗಬೆಳ್ಳೂರು ಪಂಚಾಯತ ಸಮಿತಿ ವತಿಯಿಂದ ಅಭಿನಂದನೆ ಸಭೆ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ರಾಜೇಶ್ ನಾಯಕ್, ಕಾರ್ಯಕರ್ತರು ಹಗಲಿರುಳು ಶ್ರಮಿಸಿದ ಫಲವಾಗಿ ಶಾಸಕನಾಗಿ ಆಯ್ಕೆಯಾಗಲು ಅವಕಾಶವಾಯಿತು.‌ ನಿಮ್ಮ ಶ್ರಮಕ್ಕೆ ಯಾವುದೇ ರೀತಿಯ ಕುಂದುಬಾರದ ರೀತಿಯಲ್ಲಿ ಹಿರಿಯರ ಮಾರ್ಗದರ್ಶನ ದಲ್ಲಿ ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಗೆಲುವು ಮುಂದಿನ ದಿನಗಳಲ್ಲಿ ನಿರಂತರವಾಗಿ ಬಿಜೆಪಿ ಪಕ್ಷದ ಎಲ್ಲಾ ಚುನಾವಣೆಗಳಿಗೂ ನಾಂದಿ ಯಾಗಲಿ ಎಂದರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಯಾವ ಸಮಸ್ಯೆಗಳು ಇದ್ದರೂ ನೇರವಾಗಿ ಶಾಸಕನ ಗಮನಕ್ಕೆ ನೀಡಿದರೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು.‌

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಮುಂದಿನ ದಿನಗಳಲ್ಲಿ ಬಹಳ ಜವಬ್ದಾರಿ ಕಾರ್ಯಕರ್ತರಿಗೆ ಇದೆ, ಕ್ಷೇತ್ರದ ಅಭಿವೃದ್ಧಿ ಯಲ್ಲಿ ಶಾಸಕರ ಜೊತೆಯಲ್ಲಿ ಬೆಂಬಲ ನೀಡಲು ತಿಳಿಸಿದರು. ರಾಜೇಶ್ ನಾಯ್ಕ್ ಅವರು ನಿರಂತರ ಕ್ಷೇತ್ರ ಪ್ರವಾಸದ ಜೊತೆಗೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ಫಲವಾಗಿ ಗೆಲುವು ಸಾಧ್ಯವಾಯಿತು ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಹರಿಕ್ರಷ್ಣ ಬಂಟ್ವಾಳ ಮಾತನಾಡಿ, ಜಾತಿ ಧರ್ಮ, ಭಾಷೆಗಳನ್ನು ಬಿಟ್ಟು ರಾಷ್ಟ್ರೀಯ ಚಿಂತನೆ ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡಿದರು.

ವೇದಿಕೆಯಲ್ಲಿ ಬಂಟ್ವಾಳ ಬಿಜೆಪಿ  ಅಧ್ಯಕ್ಷ ದೇವದಾಸ್ ಶೆಟ್ಟಿ,  ಬಿಜೆಪಿ  ಹಿರಿಯ  ಸಂಘಟಕರಾದರಾದ ಉಮನಾಥ ರೈ, ವಕೀಲ ರಾದ ಪ್ರಸಾದ್ ಕುಮಾರ್  ರೈ, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಕ್ಷೇತ್ರದ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಪಂಚಾಯತ ಸಮಿತಿ ಅದ್ಯಕ್ಷ ಜನಾರ್ದನ ಕೊಟ್ಟಾರಿ, ಬಡಗಬೆಳ್ಳೂರು ಪ್ರಭಾರಿ ಆನಂದ ಶಂಭೂರು, ರೈತ ಮೂರ್ಚಾದ ಜಿಲ್ಲಾ ಕಾರ್ಯದರ್ಶಿ, ಬೆಳ್ಳೂರು ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ನಂದರಾಮ್   ರೈ, ಕ್ರಷಿಕರಾದ ಉಮೇಶ್ ಶೆಟ್ಟಿ ಪಡಿಮೊಗರು,   ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಉಸ್ಮಾನ್ ಧನುಪೂಜೆ,  ಕ್ಷೇತ್ರಾಧಿಕಾರಿ ಸಂದೀಪ್ ಬೆಳ್ಳೂರು, ಸಜೀಪ ಮುನ್ನೂರು ಶಕ್ತಿ ಕೇಂದ್ರದ ಅದ್ಯಕ್ಷ ಅರವಿಂದ ಭಟ್, ಕ್ಷೇತ್ರದ ಕಾರ್ಯದರ್ಶಿ ರಮಾನಾಥ ರಾಯಿ, ಕುಂದಾಪುರ ಕ್ಷೇತ್ರ ದ ವಿಸ್ತಾರಕ ಪ್ರಕಾಶ್ ಬೆಳ್ಳೂರು,  ಗ್ರಾ.ಪಂ.ಸದಸ್ಯೆ ರೂಪ, ಬೂತ್ ಸಮಿತಿ ಅಧ್ಯಕ್ಷ ರುಗಳಾದ  ಚಿದಾನಂದ, ಶ್ರೀನಿವಾಸ, ಪ್ರವೀಣ್, ಉದಯ, ಲೋಕನಾಥ ಕಮ್ಮಾಜೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ವೇದಾವತಿ, ಪ್ರಧಾನ ಕಾರ್ಯದರ್ಶಿ ತಿರುಲೇಶ್ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ರೈತ ಮೋರ್ಚಾ ಉಪಾಧ್ಯಕ್ಷ ರಮೇಶ್ ಎಸ್ ಭಟ್ಟಾಜೆ ಸ್ವಾಗತಿಸಿ ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಜನಾರ್ದನ ಕೊಟ್ಟಾರಿ ವಂದಿಸಿದರು. ಶಶಿಕಿರಣ್ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿದರು.

badagabelluru-2

badagabelluru-3

badagabelluru-1

Back To Top
Highslide for Wordpress Plugin