Rajesh Naik

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ರಾಜಿನಾಮೆಗೆ ಆಗ್ರಹ

RN-19-06-2017-2

ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರವು ಅಧಿಕಾರಿಗಳ ಮೇಲೆ ದಬ್ಬಾಳಿಕೆ,ಕಿರುಕುಳ ಮತ್ತು ಒತ್ತಡಗಳಿಂದ ಅಧಿಕಾರಿಗಳು ನ್ಯಾಯಸಮ್ಮತವಾಗಿ ಕೆಲಸಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣ ಮಾಡಿದೆ ಸರಕಾರದ ಕಾರ್‍ಯವೈಖರಿಯಿಂದ ಪೋಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಈ ಸರಕಾರದ ಅಡಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಸಂಶಯ ಜನರ ಮನಸ್ಸಿನಲ್ಲಿ ಇರುವಾಗಲೇ ಇದಕ್ಕೆ ಪುಷ್ಟಿ ಕೊಡುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈಯವರು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ಗುಲಾಬ್ ರಾಮ್ ಭೋರಸೆಯವರನ್ನು ಬಂಟ್ವಾಳದ ಪ್ರವಾಸಿ ಬಂಗ್ಲೆಗೆ ಕರೆಸಿ ಕಾಂಗ್ರೇಸ್ ಕಾರ್‍ಯಕರ್ತರ ಮತ್ತು ಕ್ರಿಮಿನಲ್‌ಗಳ ಸಮ್ಮುಖದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕರವರನ್ನು ಬಂಧಿಸಿ ಸೆಕ್ಷನ್ 307 ದಾಖಲಿಸಿ. ಅವರು ಜೈಲಿಂದ ಹೊರಬರದ ರೀತಿ ನಾನು ನೋಡಿಕೊಳ್ಳುತ್ತೇನೆ ಎಂದಿರುವುದು ಹಾಗೂ ಹಿಂದೂಗಳ ಶ್ರದ್ಧಾಕೇಂದ್ರ ಕಲ್ಲಡ್ಕ ಶ್ರೀರಾಮ ಮಂದಿರ ಅದು ಮಂದಿರವೇ ಅದು ಒಂದು ಬ್ಯುಸಿನೆಸ್ ಸೆಂಟರ್, ನೇತ್ರಾವತಿ ಹೋರಾಟಗಾರರ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೆ ನೀವು ತೆಗೆದುಕೊಳ್ಳಲಿಲ್ಲ ಪೋಲೀಸರಲ್ಲಿ ಐದಾರು ಮಂದಿ ಅರೆಸ್ಸೆಸ್ ಮೈಂಡ್‌ನವರಿದ್ದಾರೆ ಅವರನ್ನು ಸಸ್ಪೆಂಡ್ ಮಾಡಿ ಎಂದಿದ್ದೆ ನೀವು ಇವತ್ತು ನಾಳೆಯೆಂದು ಈವರೆಗೆ ಮಾಡಿಲ್ಲ .

ಈ ರೀತಿಯಾಗಿ ಒಬ್ಬ ಐಪಿಎಸ್ ಅಧಿಕಾರಿಯನ್ನು ತನ್ನೆದುರು ಕುಳ್ಳಿರಿಸಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿ ಒತ್ತಡ ತಂತ್ರದ ಮೂಲಕ ತನಗೆ ಬೇಕಾದಂತೆ ಕೆಲಸ ಮಾಡಿಸುವ ಸಚಿವರ ವರ್ತನೆಯನ್ನು ಬಂಟ್ವಾಳ ಕ್ಷೇತ್ರ ಭಾರತೀಯ ಜನತಾ ಪಾರ್ಟಿಯು ತೀವ್ರವಾಗಿ ಖಂಡಿಸುವುದು ಇಂತಹ ಬೇಜವಬ್ದಾರಿ ಹೇಳಿಕೆ ಮತ್ತು ಒತ್ತಡ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ಆಗ್ರಹಿಸಿದ್ದಾರೆ ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ರಾಜೇಶ್ ನಾಯ್ಕ್ ಹಾಗೂ ಬಿಜೆಪಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Back To Top
Highslide for Wordpress Plugin