Rajesh Naik

“ಗ್ರಾಮದೆಡೆಗೆ -ಬಿಜೆಪಿ ನಡಿಗೆ” – ಈ ನಡಿಗೆ ದೇಶಕ್ಕಾಗಿ ಎಂಬ ಹೆಮ್ಮೆ ಇದೆ : ರಾಜೇಶ್ ನಾಯ್ಕ್

ಬಂಟ್ವಾಳ : ಕಾಂಗ್ರೇಸ್‌ನ ದುರಾಡಳಿತವನ್ನು ವಿರೋಧಿಸಿ, ಗ್ರಾಮ ಗ್ರಾಮಗಳಲ್ಲಿ ಜಾತಿಮತ ಬೇಧ ಮರೆತು ನರೇಂದ್ರ ಮೋದಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಮೋದಿಯನ್ನೇ ಪ್ರಧಾನಿಯಾಗಿಸುವ ಸಂಕಲ್ಪ ತೊಟ್ಟಿದ್ದಾರೆ ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 12 ನೇ ದಿನವಾದ ಶನಿವಾರ ರಾತ್ರಿ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

KALLIGE-PADAYATREE

ಪಕ್ಷ ಕಾರ್ಯಕರ್ತರು ಮುಂದಿನ ಲೋಕಸಭಾ ಚುನಾವಣೆಯವರೆಗೂ ವಿರಮಿಸಬಾರದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮನೆಮನೆಗೂ ತಲುಪಿಸಿ ಎಂದರು. ಗ್ರಾಮಗ್ರಾಮಗಳಿಗೆ ಪಾದಯಾತ್ರೆ ನಡೆಸಿದ ರಾಜೇಶ್ ನಾಯ್ಕ್ ಬಂಟ್ವಾಳ ಕ್ಷೇತ್ರದಲ್ಲಿ ಹೊಸ ಸಂಚಲನ ತಂದಿದ್ದಾರೆ ಎಂದವರು ಶ್ಲಾಘಿಸಿದರು.

ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ. ಆನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ “ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ಕಳೆದ 12 ದಿನಗಳಲ್ಲಿ 269 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಸಾಗಿದ್ದೇವೆ, ಇದು ಸ್ವಲ್ಪ ಕಷ್ಟವೆನ್ನಿಸಿದರೂ, ಈ ನಡಿಗೆ ದೇಶಕ್ಕಾಗಿ ಎಂಬ ಹೆಮ್ಮೆ ಇದೆ ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್ ನೆತ್ರಕೆರೆ ಮಾತನಾಡಿದರು.

ಪಕ್ಷದ ಪ್ರಮುಖರಾದ ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ, ಗೋವಿಂದ ಪ್ರಭು, ಪೃಥ್ವಿರಾಜ್, ದೇವಪ್ಪ ಪೂಜಾರಿ, ರೊನಾಲ್ಡ್ ಡಿಸೋಜ ಅಮ್ಟಾಡಿ, ಶಶಿಧರ್ ಬ್ರಹ್ಮರಕೂಟ್ಲು, ದಿನೇಶ್ ಅಮ್ಟೂರು, ಅಬ್ದುಲ್ ರಝಾಕ್, ತನಿಯಪ್ಪ ಗೌಡ, ಪ್ರವೀಣ್ ತುಂಬೆ, ಪ್ರವೀಣ್ ಕಂಜತ್ತೂರು, ಪ್ರಕಾಶ್ ತುಂಬೆ, ಗಣೇಶ್ ಪಚ್ಚಿನಡ್ಕ, ಅನಿತಾ ಮಾಧವ, ದಯಾನಂದ, ಮಾಧವ ವಳವೂರು, ಮತ್ತಿತರರು ಉಪಸ್ಥಿತರಿದ್ದರು. ಪುರುಷ ಎನ್ ಸಾಲ್ಯಾನ್ ನೆತ್ರಕೆರೆ ಸ್ವಾಗತಿಸಿದರು, ಮಹೇಶ್ ಚಂದ್ರಿಗೆ ವಂದಿಸಿದರು. ಕಿರಣ್ ಜಾರಂದಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು.

Back To Top
Highslide for Wordpress Plugin