Rajesh Naik

ಜಿಲ್ಲೆಯ ವಿವಿಧೆಡೆ ಆಯುಷ್ಮಾನ್ ಭಾರತ್ ನೊಂದಣಿ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ

ಕೊಳ್ನಾಡು

ಬಿ.ಜೆ.ಪಿ ಕೊಳ್ನಾಡು ಮಹಾಶಕ್ತಿ ಕೇಂದ್ರ ಮತ್ತು ಬಿ.ಜೆ.ಪಿ ಯುವ ಮೋರ್ಚಾ ವತಿಯಿಂದ ಕರೋಪಾಡಿ ಗ್ರಾಮದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿರವರ ಮಹತ್ವಾಕಾಂಕ್ಷೆಯ ಯೋಜನೆ ಆಯುಷ್ಮಾನ್ ಭಾರತ್ ಇದರ ನೊಂದಣಿ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಲೋಹಿತ್ ಕೊಳ್ನಾಡು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಬಂಟ್ವಾಳ ರೈತ ಮೋರ್ಚಾ ಕಾರ್ಯದರ್ಶಿ ಹರೀಶ್ ಬೇಡಗುಡ್ಡೆ, ಸಂಯೋಜಕರಾದ ಕುಡ್ಪಲ್ತಡ್ಕ ಬೂತ್ ಸಮಿತಿ ಅಧ್ಯಕ್ಷ, ನಿಕಟಪೂರ್ವ ಪಂಚಾಯತ್ ಸದಸ್ಯ, ಅಶ್ವಥ್ ಶೆಟ್ಟಿ ಆನೆಯಾಲ ಮಂಟಮೆ ಪಕ್ಷದ ಪ್ರಮುಖರಾದ, ರಘುನಾಥ ಶೆಟ್ಟಿ ಪಟ್ಲ, ವಿಘ್ನೇಶ್ವರ ಭಟ್, ರಮೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಆದರ್ಶ್ ಶೆಟ್ಟಿ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.


ಸಜಿಪಮುನ್ನೂರು

ಬಿ.ಜೆ.ಪಿ ಸಜಿಪಮುನ್ನೂರು ಮಹಾಶಕ್ತಿ ಕೇಂದ್ರ ಮತ್ತು ಬಿ.ಜೆ.ಪಿ ಯುವ ಮೋರ್ಚಾ ವತಿಯಿಂದ ಕರಿಯಂಗಳ ಗ್ರಾಮದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿರವರ ಮಹತ್ವಾಕಾಂಕ್ಷೆಯ ಯೋಜನೆ ಆಯುಷ್ಮಾನ್ ಭಾರತ್ ಇದರ ನೊಂದಣಿ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂ.ಸದಸ್ಯರಾದ ಯಶವಂತ ಪೊಳಲಿ, ಮಾಜಿ ಗ್ರಾಮ ಪಂ.ಅಧ್ಯಕ್ಷರಾದ ಚಂದ್ರಾವತಿ, ಬಿ.ಜೆ.ಪಿ ಪ್ರಮುಖರಾದ ವೆಂಕಟೇಶ್ ನಾವಡ, ಸುಕೇಶ್ ಚೌಟ, ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಕಾರ್ತಿಕ್ ಬಳ್ಳಾಲ್ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.


ಗೋಳ್ತಮಜಲು

ಬಿ.ಜೆ.ಪಿ ಗೋಳ್ತಮಜಲು ಮಹಾಶಕ್ತಿ ಕೇಂದ್ರ ಮತ್ತು ಬಿ.ಜೆ.ಪಿ ಯುವ ಮೋರ್ಚಾ ವತಿಯಿಂದ ಬಾಳ್ತಿಲ ಗ್ರಾಮದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿರವರ ಮಹತ್ವಾಕಾಂಕ್ಷೆಯ ಯೋಜನೆ ಆಯುಷ್ಮಾನ್ ಭಾರತ್ ಇದರ ನೊಂದಣಿ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚೆನ್ನಪ್ಪ ಕೋಟ್ಯಾನ್, ಕಮಲಾಕ್ಷಿ ಆರ್ ಪೂಜಾರಿ, ಲಕ್ಷ್ಮೀಗೋಪಾಲ ಆಚಾರ್ಯ, ಸುರೇಶ್ ಶೆಟ್ಟಿ, ವಿಠಲ್ ನಾಯಕ್, ಪೂರ್ಣಿಮಾ, ಶಿವರಾಜ್, ಆನಂದ ಶೆಟ್ಟಿ, ವೆಂಕಟ್ರಾಯ ಪ್ರಭು, ಸುಂದರ್ ಸಾಲ್ಯಾನ್ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.


ಬರಿಮಾರು

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಬರಿಮಾರಿನ ಶ್ರೀ ದೇವಿ ಭಜನಾ ಮಂದಿರದಲ್ಲಿ ಬರಿಮಾರು ಬಿಜೆಪಿ ವತಿಯಿಂದ ನಡೆದ ಆಯುಷ್ಮಾನ್ ಭಾರತ್ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಬರಲು ನರೇಂದ್ರ ಮೋದಿಯವರ ನಾಯಕತ್ವ ಹಾಗೂ ದೂರದರ್ಶಿತ್ವ ಕಾರಣ ಎಂದರು.

ಆಯುಷ್ಮಾನ್ ಭಾರತ್ ನಿಂದಾಗಿ ಇಂದು ಭಾರತದ ಬಡ ವರ್ಗಕ್ಕೆ ಅನುಕೂಲವಾಗಿದ್ದು ಈ ಯೋಜನೆ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿ. ಪಂ. ಸದಸ್ಯರಾದ ಶ್ರೀಮತಿ ಕಮಲಾಕ್ಷಿ ಕೆ ಪೂಜಾರಿ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಮಾನಾಥ ರಾಯಿ ಮಾಣಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಶ್ರೀ ಗಣೇಶ್ ರೈ ಮಾಣಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾಶಿವ ಜಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗಣೇಶ್, ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಆನಂದ ಪಾಪೆತ್ತಿಮಾರು,ನಿರ್ದೇಶಕರರಾದ ಶಿವಾನಂದ ಕರ್ತಕೋಡಿ, ವಾರ್ಡಿನ ಕಾರ್ಯದರ್ಶಿ ಮೋಹನ್ ಗುಳಿಗಕೋಡಿ, ಗುರುರಾಜ್. 1ನೇ ವಾರ್ಡಿನ ಅಧ್ಯಕ್ಷರಾದ ಸಂತೋಷ್ ಪ್ರಭು, ಉಪಸ್ಥಿತರಿದ್ದರು ಬರಿಮಾರು ೩ ನೇ ವಾರ್ಡಿನಅಧ್ಯಕ್ಷರಾದ ಅಶ್ವತ್ಥ್ ಬರಿಮಾರು ಸ್ವಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 600 ಮಂದಿ ಪ್ರಯೋಜನ ಪಡೆದರು.


ಶಂಭೂರು

ಶಂಭೂರು ಬಿ.ಜೆ.ಪಿ ಬೂತ್ ಸಮಿತಿ 153, 154 ಮತ್ತು ವ್ಯಾಯಾಮ ಶಾಲಾ ಸಹಭಾಗೀತ್ವದಲ್ಲಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಪ್ರಧಾನ ಮಂತ್ರಿಯವರ ಜನಪರ ಯೋಜನೆ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ ಭಾಗವಹಿಸಿ ಮಾತಾಡಿ ಬಡ ಜನರಿಗೆ ಆರೋಗ್ಯದಲ್ಲಿ ತೊಂದರೆಯಾದಾಗ ಆಸ್ಪತ್ರೆಗಳ ಬಿಲ್ ಬರಿಸಲು ಕಷ್ಟಪಡುವ ಸಂಧರ್ಭದಲ್ಲಿ ಸರಕಾರ ಜಾರಿಗೆ ತಂದ ಪ್ರಧಾನ ಮಂತ್ರಿಯವರ ಆಯುಷ್ಮಾನ್ ಯೋಜನೆ ತುಂಬಾ ಪ್ರಯೋಜನ ಆಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು. ಗ್ರಾಮದ ಅಭಿವೃದ್ಧಿಯ ಬಗ್ಗೆ ಕಾರ್ಯಕರ್ತರು ಶಾಸಕರಿಗೆ ಮನವಿ ಅರ್ಪಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಸದಸ್ಯೆ ಕಮಾಲಾಕ್ಷಿ ಕೆ ಪೂಜಾರಿ, ಮಂಡಲದ ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ, ಮಂಡಲದ ಕಾರ್ಯದರ್ಶಿ ರಮಾನಾಥ ರಾಯಿ, ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಯಶೋಧರ ಕರ್ಬೇಟ್ಟು, ಸದಾಶಿವ ಬರಿಮಾರು, ಕ್ಷೇತ್ರ ಸಮಿತಿ ಸದಸ್ಯ ಜಿನ್‌ರಾಜ್ ಕೋಟ್ಯಾನ್, ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ದಿವಾಕರ ಶಂಭೂರು, ಜಯರಾಜ್ ಕೆ, ಉದಯರಾಜ್, ಹೇಮಲತಾ, ಬೂತ್ ಸಮಿತಿ ಅಧ್ಯಕ್ಷರಾದ ಯೋಗೀಶ, ಸಂತೋಷ್, ಕಾರ್ಯದಶಿಗಳಾದ ಪ್ರಕಾಶ್ ಎಂ, ಕೇಶವ ಬಿ, ಪ್ರಗತಿ ಪರ ಕೃಷಿಕರಾದ ಬಾಲಕೃಷ್ಣ ಹೊಳ್ಳ, ನಿವೃತ್ತ ಅಂಚೆ ಅಧಿಕಾರಿ ಕಮಲಾಕ್ಷ ಬಿ, ವ್ಯಾಯಾಮ ಶಾಲಾ ಕಾರ್ಯದರ್ಶಿ ಬೋಜರಾಜ್, ಕೋಶಾಧಿಕಾರಿ ಕಮಲಾಕ್ಷ ಎಸ್, ವ್ಯಾಯಾಮ ಶಾಲಾ ಸದಸ್ಯರಾದ ದಿನೇಶ್, ರಾಘವ್ ಆಚಾರ್ಯ, ಗಣೇಶ್, ವಿಕ್ಷೀತ್, ಹೇಮಂತ್, ಕಿಶೋರ್ ಉಪಸ್ಥಿತರಿದ್ದರು. ಮಂಡಲದ ಹಿಂದುಳಿದ ಮೋರ್ಚಾಗಳ ಅಧ್ಯಕ್ಷರಾದ ಆನಂದ ಎ ಶಂಭೂರು ಸ್ವಾಗತಿಸಿ ವಂದಿಸಿದರು.

Back To Top
Highslide for Wordpress Plugin