Rajesh Naik

ಮೂಲರಪಟ್ಟ ಸೇತುವೆ ತುರ್ತು ಕಾಮಗಾರಿಗೆ ಶಾಸಕ ನಾಯ್ಕ್ ಮನವಿಗೆ ಡಿಸಿಎಂ ಸ್ಪಂದನೆ

ಮಂಗಳೂರು ಮತ್ತು ಬಂಟ್ವಾಳ ತಾಲೂಕು ಸಂಪರ್ಕಿಸುವ ಎಡಪದವು, ಕುಪ್ಪೆಪದವು, ಆರ್ಲ, ಸೊರ್ನಾಡು ಜಿಲ್ಲಾ ಮುಖ್ಯರಸ್ತೆಯ ಮೂಲರಪಟ್ಟಿ ಸೇತುವೆ ನಿರ್ಮಾಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಕಾಮಗಾರಿ ಆರಂಭಿಸಬೇಕೆಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾಡಿದ ಮನವಿಗೆ, ಪಿಡಬ್ಲ್ಯುಡಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋಂವಿಂದ ಎಂ. ಕಾರಜೋಳ ಸ್ಪಂದಿಸಿದ್ದು ಕೂಡಲೇ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ.

ಸೇತುವೆ ಕುಸಿದು 13 ತಿಂಗಳು ಕಳೆದಿದ್ದು, ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು 14.35 ಲಕ್ಷ ರೂ. ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಪ್ರಸ್ತಾವನೆ ಸಲ್ಲಿಸಿದ್ದು, ಕಾಮಗಾರಿಯನ್ನು 2019-20ನೇ ಸಾಲಿನ ಲೆಕ್ಕ ಶೀರ್ಷಿಕೆಯಡಿ ಕ್ರಮ ಕೈಗೊಳ್ಳುವಂತೆ ಶಾಸಕ ರಾಜೇಶ್ ನಾಯ್ಕ್ ಗುರುವಾರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಹಿರಿ ಸದಸ್ಯರಾದ ಅರಳ ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಉದಯಕುಮಾರ ರಾವ್ ಜೊತೆಗಿದ್ದರು.

DCM-oks-bridge-rennovation

Back To Top
Highslide for Wordpress Plugin