Rajesh Naik

ಸರಕಾರಿ ಶಾಲೆ ಉಳಿವಿಗೆ ಎಲ್ಲರ ಸಹಕಾರ ಅಗತ್ಯ

ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತವಾದ ಸ್ಥಾನ ಅಲಂಕರಿಸಿದ್ದಾರೆ, ಇಂತಹ ಶಾಲೆಯ ಕೊರತೆಗಳನ್ನು ನೀಗಿಸಲು ಸರಕಾರದ ಜೊತೆ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಪ್ರತಿ ಸರಕಾರಿ ಶಾಲೆಗಳು ಉಳಿದು ಬೆಳೆಯುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಗೋಳ್ತಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ವತಿಯಿಂದ ಶಾಲಾ ಮಕ್ಕಳಿಗೆ ಕಂಪ್ಯೂಟರ್, ಪ್ರಿಂಟಿಂಗ್ ಮೆಷಿನ್, ಶಾಲಾ ಬ್ಯಾಗ್ ಹೀಗೆ ವಿವಿಧ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

School

ಹೊಸ ಶಾಲೆಯ ನಿರ್ಮಾಣದ ಬದಲು ಹಳೆಯ ಸರಕಾರಿ ಶಾಲೆಗಳ ಅಭಿವೃದ್ಧಿ ಗಾಗಿ ಪಣತೊಡುವಂತೆ ಯುವಕರಿಗೆ ಕರೆ ನೀಡಿದರು. ಸಮಿತಿ ಅಥವಾ ದಾನಿಗಳ ಸಹಾಯದಿಂದ ಶಾಲೆಯ ದತ್ತು ಪಡೆದು ಶಿಕ್ಷಣ ನೀಡುವ ಮಹತ್ತರ ಕಾರ್ಯಕ್ಕೆ ಯುವ ಜನತೆ ಮನಸ್ಸು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರಕಾರ ದ ಸವಲತ್ತುಗಳನ್ನು ನೀಡಲು ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಅಂಗನವಾಡಿಗಳನ್ನು ಸರಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಲು ಚಿಂತನೆ ನಡೆಸಲಾಗುತ್ತಿದ್ದು ಸರಕಾರದ ಮಟ್ಟದಲ್ಲಿ ಒತ್ತಡ ಹಾಕುತ್ತಿದ್ದೇನೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಸರಕಾರದ ಸವಲತ್ತುಗಳನ್ನು ಮಾತ್ರ ಉಪಯೋಗಿಸಿಕೊಂಡು ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಜೊತೆಗೆ ಶಾಲಾ ಎಸ್.ಡಿ.ಎಂ.ಸಿ. ಸಹಾಯದ ಮೂಲಕ ಅಭಿವೃದ್ಧಿ ಪಡಿಸುವ ಮನಸ್ಸು ಮಾಡಿದರೆ ಮಾತ್ರ ಸರಕಾರಿ ಶಾಲೆಗಳನ್ನು ಬಲಪಡಿಸಬಹುದು ಎಂದು ಅವರು ಹೇಳಿದರು. ಸರಕಾರಿ ಶಾಲೆ ನಮ್ಮ ಶಾಲೆ ಎಂಬ ಮನಸ್ಸು ಮಾಡಬೇಕಾಗಿದೆ ಎಂದು ಅವರು ಹೇಳಿದರು. ‌

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಕಾರ್ಯಧ್ಯಕ್ಷ ಚಂದ್ರಶೇಖರ್ ಟೈಲರ್ ಎಸ್.ಡಿ.ಎಂ.ಸಿ.ಕಾರ್ಯಧ್ಯಕ್ಷ ಚಂದ್ರಶೇಖರ್ ಟೈಲರ್, ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸುಧಾಕರ ರೈ, ಶಾಲಾ ಸ್ಥಳದಾನಿ ಮಹಮ್ಮದ್ ಯೂಸುಫ್ ಹಾಜಿ ಹಜಾಜ್ , ತಾ.ಪಂ.ಸದಸ್ಯ ಮಹಾಬಲ ಆಳ್ವ, ಗ್ರಾ.ಪಂ.ಸದಸ್ಯ ಮೋನಪ್ಪ ದೇವಸ್ಯ, ಗ್ರಾ.ಪಂ.ಸದಸ್ಯೆ ಜಯಶ್ರೀ ಹಾಗೂ ಎಸ್.ಡಿ.ಎಂ.ಸಿ.ಸದಸ್ಯರುಗಳು ಉಪಸ್ಥಿತರಿದ್ದರು.

ಶಿಕ್ಷಕ ನಾರಾಯಣ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ಉಚಿತವಾಗಿ ನೀಡಿದ ದಾನಿಗಳನ್ನು ಶಾಲಾಭಿವೃದ್ದಿ ವತಿಯಿಂದ ಶಾಸಕರು ಶಾಲು ಹೊದಿಸಿ ಗೌರವಿಸಿದರು. ಮುಖ್ಯೋಪಾಧ್ಯಾಯಿನಿ ಸುಜಾತ ಎಂ.ಸ್ವಾಗತಿಸಿ. ಶಿಕ್ಷಕ ಶಂಕರ್ ಪಾವಸ್ಕರ್ ವಂದಿಸಿದರು.ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

Back To Top
Highslide for Wordpress Plugin