Rajesh Naik

ಮಾವಿನಕಟ್ಟೆಯಲ್ಲಿ ಕಮಲ ಜ್ಯೋತಿ ಅಭಿಯಾನ

ಭಾರತೀಯ ಜನತಾ ಪಾರ್ಟಿಯ ಚೆನ್ನೈತ್ತೋಡಿ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಕಮಲ ಜ್ಯೋತಿ ಅಭಿಯಾನ ನಡೆಯಿತು. ಸರ್ವರಿಗೆ ಸಮಪಾಲು ಸರ್ವರಿಗೆ ಸಮ ಬಾಳು ಕಲ್ಪನೆಯ ಕೇಂದ್ರ ಸರ್ಕಾರದ ಸಂಕಲ್ಪ ಲೋಕಸಭಾ ಸದಸ್ಯರಾದ ನಳಿನ್ ಕುಮಾರು ಕಟೀಲ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಅಧಿಕಾರ ಅವಧಿಯಲ್ಲಿ ಸುಮಾರು 153 ವಿವಿಧ ಜನಪರ ಯೋಜನೆಗಳು ಮತ್ತು ಐತಿಹಾಸಿಕ ತಿರ್ಮಾನಗಳನ್ನು ಸಕಾರಗೊಳಿಸಿ ಭವಿಷ್ಯದಲ್ಲಿ ಪ್ರತಿಯೊಬ್ಬ ಪ್ರಜೆಯು ತನ್ನ ಬದುಕಿನಲ್ಲಿ ನಿಟ್ಟುಸಿರು ಬಿಟ್ಟು ಜೀವನ ಸಾಗಿಸುವುದರ ಮುಖಾಂತರ ಎಲ್ಲಾ ಭಾರತೀಯರಿಗೆ ಸಮಪಾಲು ಸಮಬಾಳು ಕಲ್ಪಿಸುವುದೇ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪ ಎಂದು ನಳಿನ್ ಕುಮಾರು ಕಟೀಲ್ ಹೇಳಿದರು. ನಂತರ ಮೋದಿ ಅಭಿಮನ ಬಳಗದಿಂದ ಯಕ್ಷಗಾನ ನಡಿಯಿತು. ಮೋದಿ ಟೀ ಸ್ಟಾಲ್‌ನಿಂದ ಶಾಸಕರಾದ ರಾಜೇಶ್ ನಾೖಕ್‌, ಹಾಗೂ ಕ್ಷೇತ್ರದ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಜಿಲ್ಲಾ ಪಂ ಸದಸ್ಯರಾರ ತುಂಗಪ್ಪ ಬಂಗೇರ ಉದ್ಘಾಟನೆ ಮಾಡಿ ಎಲ್ಲಾ ಕಲಾಭಿಮಾನಿಗಳಿಗೆ ಟೀ ವಿತರಿಸಲಾಯಿತು. ಮತ್ತು ಚಿದಾನಂದ ಅವರು ಮೋದಿ ಚಿತ್ರಣ ಬಿಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಹವಕ್ತಾರೆಯಾದ ಸುಲೋಚನಾ ಜಿ.ಕೆ ಭಟ್ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು, ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ, ತಾಲೂಕು ಪಂ. ಸದಸ್ಯರಾದ ಪ್ರಭಾಕರ್ ಪ್ರಭು, ರಮೇಶ್ ಕುಡ್ಮೇರು, ಸಂಗಬೆಟ್ಟು ಶಕ್ತಿಕೇಂದ್ರ ಅಧ್ಯಕ್ಷರಾದ ರತ್ನಕುಮಾರ್ ಚೌಟ, ಕ್ಷೇತ್ರದ ಉಪಾಧ್ಯಕ್ಷರಾದ ವಿಜಯ ರೈ, ಹಾಗೂ ಕೃಷ್ಣ ಅಲಿಯಾಸ್ ಮೋದಿ ಭಟ್ ಉಡುಪಿ, ಮಂಡಲದ ಪ್ರ.ಕಾರ್ಯದರ್ಶಿಯಾದ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ಶೇಖರ್ ಮತ್ತು ಜಗದೀಶ ಶೆಟ್ಟಿ ಮುತಾಂದವರು ಉಪಸ್ಥಿತರಿದ್ದರು.

Kamal-jyoti-02

Back To Top
Highslide for Wordpress Plugin