Rajesh Naik

ನವೋದಯ ಯುವಕ ಸಂಘ(ರಿ)ದ 29ನೇ ವಾರ್ಷಿಕೋತ್ಸವ

ಬಂಟ್ವಾಳ: ನವೋದಯ ಯುವಕ ಸಂಘ(ರಿ) ಮೈರಾನ್ ಪಾದೆ, ಕಾಮಾಜೆ ಇವರ 29ನೇ ವಾರ್ಷಿಕೋತ್ಸವ ಅಂಗವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ನವೋದಯ ರಂಗಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ನವ ಉದಯವಾಗಿರುವ ನವೋದಯ ಯುವಕ ಸಂಘ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜಿಲ್ಲೆಗೆ ಮಾದರಿಯಾಗಿದೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.‌

ಮುಖ್ಯ ಅತಿಥಿಯಾಗಿ ಅಗಮಿಸಿ ಮಾತನಾಡಿದ ಹರಿಕ್ರಷ್ಣ ಬಂಟ್ವಾಳ್ ಪ್ರತಿಯೊಬ್ಬರು ತನ್ನ ಶಕ್ತಿಯನ್ನು ಭಾರತ ದೇಶದ ಆರ್ಥಿಕ ಸಾಮಾಜಿಕ ವ್ಯವಸ್ಥೆಯನ್ನು ಭದ್ರಗೊಳಿಸಲು ಸಲುವಾಗಿ ವಿನಿಯೋಗಿಸುವಂತೆ ಕರೆ ನೀಡಿದರು.

ಮನುಷ್ಯನಲ್ಲಿ ಮಹತ್ವಾಕಾಂಕ್ಷೆ ಇದ್ದರೆ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ, ಪ್ರತಿಯೊಬ್ಬರು ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರದ ಬದುಕು ಕಲಿಸುವ ಕೆಲಸ ಮಾಡಿ, ಪ್ರತಿಯೊಬ್ಬರು ಹೃದಯವಂತಿಕೆಯ ಜೊತೆ ದೇಶವನ್ನು ಉಳಿಸುವ ನಿಟ್ಟಿನಲ್ಲಿ ಸಂಘಟಿತರಾಗಿ ಎಂದು ಅವರು ಹೇಳಿದರು. ಇಂತಹ ಕಾರ್ಯಕ್ರಮಗಳ ಮೂಲಕ ದೇಶದ ಚಿಂತನೆಯ ಕೆಲಸಕ್ಕಾಗಿ ಈ ಸಂಘಟನೆ ಪ್ರತಿ ವರ್ಷ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ವೇದಿಕೆಯಲ್ಲಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ದಿವಾಕರ ಶಂಭೂರು, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಬಿ. ಉದ್ಯಮಿ ಗಣೇಶ್ ಕೊಲ್ಯ, ಸಂಗಬೆಟ್ಟು ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಸ್ಥಳೀಯ ಪುರಸಭಾ ಸದಸ್ಯೆ ಶೋಭಾ ಹರಿಶ್ಚಂದ್ರ, ಸಂಘದ ಅಧ್ಯಕ್ಷ ರಮೇಶ್ ಭಂಡಾರಿ ಮೈರಾನ್ ಪಾದೆ, ಉಪಾಧ್ಯಕ್ಷ ಜಯಂತ್ ಕಾಮಾಜೆ, ಕಾರ್ಯದರ್ಶಿ ದಿನೇಶ್ ಮೈರಾನ್ ಪಾದೆ, ಜೊತೆ ಕಾರ್ಯದರ್ಶಿಗಳಾದ ಸಂತೋಷ್ ಕಾಮಾಜೆ, ಬಾಲಕ್ರಷ್ಣ ಕಾಮಾಜೆ , ಕೋಶಾಧಿಕಾರಿ ಗಿರೀಶ್ ಕಾಮಾಜೆ ಹಾಗೂ ನವೋದಯ ಯುವಕ ಸಂಘದ ಸರ್ವಸದಸ್ಯರು ಹಾಜರಿದ್ದರು. ಅಕ್ಷಯ್ ಸ್ವಾಗತಿಸಿ, ಉಮೇಶ್ ವಂದಿಸಿದರು. ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಕಾಮಾಜೆ ವರದಿವಾಚಿಸಿದರು.‌

ಇದೇ ಸಂದರ್ಭದಲ್ಲಿ ಪ್ರಬುದ್ದ ರಂಗಕಲಾವಿದ ಪ್ರವೀಣ್ ಕಾಮಾಜೆ ಹಾಗೂ ಕಲಿಕೆಯಲ್ಲಿ ಅಪೂರ್ವ ಸಾಧನೆ ಮಾಡಿದ ಮಾ. ಸೂರಜ್ ಕಾಮಾಜೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಂದ ಹಾಗೂ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಗಳು ನಡೆಯಿತು. ರಾತ್ರಿ ಶಾರದಾ ಕಲಾವಿದರಿಂದ ಇತ್ತ್ ನಾತ್ ದಿನ ತುಳು ಹಾಸ್ಯ ನಾಟಕ ನಡೆಯಿತು.

Navodaya-annual-day-1

Navodaya-annual-day-2

Back To Top
Highslide for Wordpress Plugin