Rajesh Naik

ಬಂಟ್ವಾಳ ಪುರಸಭೆಗೆ ಶಾಸಕರ ದಿಢೀರ ಭೇಟಿ, ಪರಿಶೀಲನೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೋಮವಾರ ದಿಢೀರನೇ ಪುರಸಭೆಗೆ ಭೇಟಿ ನೀಡಿ, ವಿವಿಧ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕುಡಿಯುವ ನೀರು, ಸಮಗ್ರ ಒಳಚರಂಡಿ ಯೋಜನೆ, ಟ್ರಾಫಿಕ್ ಸಮಸ್ಯೆ, ಕಸವಿಲೇವಾರಿ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಲಹೆ, ಸೂಚನೆಗಳನಿತ್ತರು.

ಮಂಗಳೂರು ಸಹಾಯಕ ಕಮಿಷನರ್, ಪುರಸಭೆಯ ಆಡಳಿತಾಧಿಕಾರಿ ರವಿಚಂದ್ರ ನಾಯಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಕೆಯುಡಬ್ಲ್ಯೂಎಸ್ ಎಂಜಿನಿಯರ್‌ಗಳಾದ ಜಗದೀಶ್, ಸಂಶುದ್ದೀನ್, ಪುರಸಭೆಯ ಕಿರಿಯ ಇಂಜಿನಿಯರ್ ಡೊಮೆನಿಕ್ ಅರಣ್ಯಾಧಿಕಾರಿ, ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.

bantwal-corp-2

bantwal-corp-1

Back To Top
Highslide for Wordpress Plugin