Rajesh Naik

ಶಾಸಕರ ಪ್ರಯತ್ನದ ಫಲ ಅಟಲ್‌ಜೀ ಜನ ಸ್ನೇಹಿ ಕೇಂದ್ರ ಸ್ಥಳಾಂತರ

ಬಂಟ್ವಾಳ ತಾಲೂಕು ಕಛೇರಿಯನ್ನು ಕೆಡವಿ ನೂತನ ಮಿನಿವಿಧಾನಸೌಧ ನಿರ್ಮಾಣ ಮಾಡುವ ಸಮಯ ಅಟಲ್‌ಜೀ ಜನಸ್ನೇಹಿ ಕೇಂದ್ರವನ್ನು ತಾತ್ಕಾಲಿಕವಾಗಿ ಹತ್ತಿರದ ಹಳೆ ರಂಗ ಮಂದಿರ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ತದನಂತರ ಮಿನಿವಿಧಾನಸೌಧ ನಿರ್ಮಾಣಗೊಂಡು ಉದ್ಫಾಟನೆಗೊಂಡು ನಂತರ ಎಲ್ಲಾ ಕಛೇರಿಗಳು ಹೊಸ ಮಿನಿವಿಧಾನಸೌಧದಲ್ಲಿ ಕಾರ್‍ಯಾರಂಭಗೊಂಡರೂ ಸಹ ತಿಂಗಳುಗಟ್ಟಲೇ ಅಟಲ್ ಜೀ ಜನಸ್ನೇಹಿ ಕೇಂದ್ರ ಮಾತ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಹೊಳ್ಳಲಿಲ್ಲ. ಇದರಿಂದ ಈ ವರ್ಷದ ಆರಂಭದಲ್ಲಿ ಬಂದ ಗಾಳಿ ಮನೆಗೆ ಹಳೆ ರಂಗ ಮಂದಿರ ಸೋರಿ ನೀರು ಬಿದ್ದು ಕಡತ, ಆಧಾರ್ ಕೇಂದ್ರದ ಕಂಪ್ಯೂಟರ್ ಹಾಳಾಗಿದ್ದವು. ಈ ಹಿನ್ನಲೆಯಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರವನ್ನು ತಕ್ಷಣ ಮಿನಿವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಾಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಶೀಘ್ರ ಸ್ಥಳಾಂತರಿಸಲು ಸೂಚನೆ ನೀಡಿದ್ದರು. ಇದೀಗ ಜಿಲ್ಲಾಧಿಕಾರಿ ಸೂಚನೆಯಂತೆ ಅಟಲ್‌ಜೀ ಜನಸ್ನೇಹಿ ಕೇಂದ್ರ ಮಿನಿ ವಿಧಾನ ಸೌಧ ಕಛೇರಿಗೆ ಸ್ಥಳಾಂತರಗೊಂಡಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.

atalji-center-2

atalji-center-1

Back To Top
Highslide for Wordpress Plugin